pastyear, improvement, sports, India, ಹರುಷ, ವರುಷ, ಭಾರತ, ಕ್ರೀಡಾರಂಗ, ಬೆಳವಣಿಗೆ
ಈ ವರ್ಷವು ನಮಗೆ ಸುಮಧುರ ನೆನಪುಗಳನ್ನು ತಂದು ಕೊಟ್ಟಿದೆ. ಭಾರತದ ಕ್ರೀಡಾರಂಗವು ಈ ವರ್ಷದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಪಡೆದಿದೆ. ಕ್ರೀಡಾರಂಗದಲ್ಲಿ ಭಾರತವು ಬೆಳೆದು ಬರುವ ಶಕ್ತಿಯೆಂದು ಇಡೀ ದೇಶಕ್ಕೆ ಸಾರುತ್ತಿದೆ. ಈ ವರ್ಷವು ನಮಗೆ ಮೆರೆಯಲಾಗದ ಹೊಸ ನೆನಪುಗಳನ್ನುಂಟುಮಾಡಿದೆ.


ಭಾರತದ ಕ್ರೀಡಾ ಕ್ಷೇತ್ರದಲ್ಲಿ ಈ ವರ್ಷ ಆದಂತಾಹ ಬೆಳವಣಿಗೆ ಅವಿಸ್ಮರಣೀಯವಾಗಿದೆ. ಭಾರತದ ಪರವಾಗಿ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ 10ಮೀಟರ್ ಏರ್ ರೈಪ್ಲಲ್ ನಲ್ಲಿ ಮೊತ್ತ ಮೊದಲ ಬಾರಿಗೆ ಚಿನ್ನದ ಪದಕವನ್ನು ಜಯಿಸುವ ಮೂಲಕ ಇತಿಹಾಸದ ಪುಟಗಳಲ್ಲಿ ಭಾರತದ ಹೆಸರು ಬರುವಂತೆ ಮಾಡಿದರು. ಕುಸ್ತಿಯಲ್ಲಿ ಸುಶೀಲ್ ಕುಮಾರ್ ಮತ್ತು ಬಾಕ್ಸಿಂಗ್‌ನಲ್ಲಿ ವಿಜೇಂದರ್ ಅವರು ಕಂಚಿನ ಪದಕವನ್ನು ಮಡೆದು ಮೆರೆದರು. ಇದಲ್ಲದೆ ವಿಶ್ವಚಾಂಪಿಯನ್ ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಚೆಸ್ ಚಾಂಪಿಯನ್ ಪಟ್ಟವನ್ನು ತನ್ನ ಮಡಿಲಿಗೆ ಹಾಕಿಕೊಂಡರು. ಪುಣೆಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹೆಚ್ಚಿನ ಚಿನ್ನ, ಬೆಳ್ಳಿ ಮತ್ತು ಕಂಚುಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪದಕವನ್ನು ಪಡೆಯುವುದರ ಮೂಲಕ ಭಾರತವು ಕ್ರೀಡಾ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ವಿಶ್ವಕ್ಕೆ ತಿಳಿಸಿದೆ.

ಭಾರತ ಕ್ರಿಕೇಟ್ ತಂಡವಂತೂ ನಂ.1 ಸ್ಥಾನದತ್ತ ಹೆಜ್ಜೆಯನ್ನಿಟ್ಟಿದೆ. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಭಾರತ ತಂಡವು ಸೋಲಿಲ್ಲದ ಸರದಾರನಂತೆ ವಿಜಯದ ಸಂಭ್ರಮವನ್ನು ಆಚರಿಸಿಕೊಂಡು ಮುಂದೆಸಾಗುತ್ತಿದೆ.
ವರ್ಷದಲ್ಲಿ ನಮ್ಮ ಮನಸ್ಸಿಗೆ ನೋವನ್ನುಂಟುಮಾಡಿದ ವಿಷಯವೆಂದರೆ ಭಾರತ ಹಾಕಿ ತಂಡದ ವೈಫಲ್ಯ. ಹಾಕಿಯನ್ನು ಹೇಗೆ ಆಡಬೇಕೆಂದು ವಿಶ್ವಕ್ಕೆ ಹೇಳಿಕೊಟ್ಟ ಭಾರತವು ಈ ವರ್ಷ ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆಯನ್ನು ಕೂಡ ಪಡೆಯಲಿಲ್ಲ. ಮತ್ತೊಂದು ವೈಫಲ್ಯವೆಂದರೆ ಸಾನಿಯ ಮಿರ್ಜಾ, ವರ್ಷದ ಆರಂಭದಲ್ಲಿ 31ನೇ ಸ್ಥಾನದಲ್ಲಿದ್ದ ಮಿರ್ಜಾ ಈಗ ನೂರರ ಗಡಿ ದಾಟಿದ್ದಾರೆ. ಇನ್ನೊಂದು ದುಃಖದ ವಿಷಯವೆಂದರೆ ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕರಾದ ಸೌರಮ್ ಗಂಗೂಲಿ ಮತ್ತು ಅನಿಲ್ ಕುಂಬ್ಳೆ ಅವರ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೇಟ್ ನಿಂದ ನಿವೃತ್ತಿ. ಹೀಗೆ ಈ ವರ್ಷದಲ್ಲಿ ಹಲವು ಬದಲಾವಣೆಗಳು ಭಾರತದ ಕ್ರೀಡಾ ರಂಗದಲ್ಲಿ ನಡೆದಿದೆ. ಇನ್ನು ಬರುವ ಹೊಸ ವರ್ಷದಲ್ಲಿ ಕ್ರೀಡಾ ರಂಗದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿ ಭಾರತವು ಕ್ರೀಡಾಕ್ಷೇತ್ರದಲ್ಲಿ ಒಂದು ಸೂಪರ್ ಪವರ್ ಆಗಿ ಬೆಳೆಯಲಿ ಎಂದು ಎಲ್ಲರ ಹಾರೈಕೆಯಾಗಿದೆ...
http://kridaranga.mywebdunia.com/articles/
ಪ್ರತಿಸ್ಪಂದನಗಳು